Skip to playerSkip to main content
  • 9 years ago
ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ 18 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರೆ, ಬಿಜೆಪಿ ಸದ್ಯ 19 ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದು ನಮಗೆ ಸಿಕ್ಕ ಅಭೂತಪೂರ್ವ ಜಯ ಎಂದು ಎಂದು ಪ್ರಧಾನಿ ಮೋದಿ ಅವರು ಭಾವುಕರಾಗಿ ನುಡಿದರು.ಇದರ ಜತೆಗೆ ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮೋದಿ, 2019ರ ಚುನಾವಣೆಗೆ ಸಿದ್ಧತೆ ನಡೆಸಿ, ಗೆಲುವಿನ ಸಂಭ್ರಮದಲ್ಲಿ ಮೈಮರೆಯಬೇಡಿ ಎಂದು ಎಚ್ಚರಿಕೆ ನೀಡಿದರು.ಸಂಸದೀಯ ಭವನದಲ್ಲಿಂದು ಬಿಜೆಪಿಯ ಸಂಸದರು ಎದ್ದು ನಿಂತು ಸಂಯೋಜಿತ ಕರತಾಡನ ಮಾಡುವ ಮೂಲಕ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು.ಗುಜರಾತ್, ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ ಸಂಭ್ರಮಾಚರಣೆಯನ್ನು ಸಿಹಿ ಹಂಚಲಾಯಿತು.ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಮೋದಿಗೆ ಶಾಲು ಹೊದೆಸಿ ಆತ್ಮೀಯ ಸನ್ಮಾನ ನೀಡಿದರು.ಗುಜರಾತಿನಲ್ಲಿ ಬಿಜೆಪಿ ಹಂತ ಹಂತವಾಗಿ ಬೆಳೆಯುತ್ತಾ ಬಂದು ಇಂದಿನ ಸ್ಥಿತಿ ತಲುಪಿದೆ. ಇದರ ಜೊತೆ ಲಕ್ಷಾಂತರ ಕಾರ್ಯಕರ ಶ್ರಮ, ತ್ಯಾಗವಿದೆ ಎಂದು ಮೋದಿ ಸ್ಮರಿಸಿದರು.
Prime Minister Narendra Modi on Wednesday gets emotional after Bharatiya Janata Party (BJP) MPs gave him a standing ovation for party's victory in Gujarat and Himachal Pradesh Assembly elections. Amit Shah was also present in BJP Party Meeting.

Category

🗞
News

Recommended