Skip to playerSkip to main content
  • 9 years ago
'ರಾಜು ಕನ್ನಡ ಮೀಡಿಯಂ' ಸಿನಿಮಾ ಕಳೆದ ಶುಕ್ರವಾರ ತೆರೆಗೆ ಬಂದಿದೆ. ಎಲ್ಲ ವರ್ಗದ ಪ್ರೇಕ್ಷಕರು ಸಹ ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ. ಪಕ್ಕಾ ಕಾಮಿಡಿ ಎಂಟಟೈನರ್ ಆಗಿರುವ 'ರಾಜು ಕನ್ನಡ ಮೀಡಿಯಂ' ಯಶಸ್ವಿ ಪ್ರದರ್ಶನವನ್ನು ಮುಂದುವರೆಸಿದೆ. ಇದರ ಜೊತೆಗೆ ಸಿನಿಮಾ ಹಿಂದಿಗೆ ರಿಮೇಕ್ ಆಗುವ ಸುದ್ದಿ ಕೂಡ ಹರಿದಾಡಿದೆ.

ಕನ್ನಡದ ಒಳ್ಳೆಯ ಸ್ವಮೇಕ್ ಸಿನಿಮಾಗಳು ಪರಭಾಷೆಗೆ ರಿಮೇಕ್ ಆಗುವ ಸಂಖ್ಯೆ ಇದೀಗ ಹೆಚ್ಚಾಗುತ್ತಿದೆ. ಆ ಸಾಲಿಗೆ ಈಗ 'ರಾಜು ಕನ್ನಡ ಮೀಡಿಯಂ' ಕೂಡ ಸೇರಿಕೊಳ್ಳಲಿದೆ. ಅಂದಹಾಗೆ, ಈ ಚಿತ್ರದ ರಿಮೇಕ್ ವಿಚಾರದ ಬಗ್ಗೆ ಚಿತ್ರದ ನಿರ್ಮಾಪಕ ಕೆ.ಎಂ.ಸುರೇಶ್ ಮತ್ತು ನಿರ್ದೇಶಕ ನರೇಶ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸ್ಪಷ್ಟಪಡಿಸಿದ್ದಾರೆ.

ಸದ್ಯ ಚಿತ್ರದ ಹಿಂದಿ ರಿಮೇಕ್ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿರುವ ನಿರ್ಮಾಪಕ ಸುರೇಶ್ ನಟ ಅಮೀರ್ ಖಾನ್ ಅವರ ಪ್ರೊಡಕ್ಷನ್ ನಲ್ಲಿ ಸಿನಿಮಾ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

Kannada movie " Raju Kannada Medium " has been released this friday . And people are liking the movie and The film will be also remade in Hindi

Category

🗞
News

Recommended