Skip to playerSkip to main content
  • 6 years ago
ಬ್ರಿಟಿಷ್ ಮೂಲದ ವಾಹನ ತಯಾರಕ ಕಂಪನಿಯಾದ ಬೆಂಟ್ಲಿ ತನ್ನ ಹೊಸ ಬೆಂಟಾಯ್ಗಾ ಎಸ್ ಯುವಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಪ್ರೀಮಿಯಂ ಐಷಾರಾಮಿ ಎಸ್ ಯುವಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಕಂಪನಿಯು ಮುಂದಿನ ವರ್ಷ ಈ ಎಸ್ ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಬೆಂಟಾಯ್ಗಾ ಎಸ್ ಯುವಿ ಬೆಂಟ್ಲಿ ಕಂಪನಿಯ ಪ್ರಮುಖ ವಾಹನವಾಗಿದೆ. 2015ರಿಂದ ಇದುವರೆಗೂ ವಿಶ್ವದಾದ್ಯಂತ ಬೆಂಟಾಯ್ಗಾ ಎಸ್ ಯುವಿಯ 20,000 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ.

2021ರ ಬೆಂಟಾಯ್ಗಾ ಎಸ್ ಯುವಿಯ ಹೊರಭಾಗದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ. ಇವುಗಳಲ್ಲಿ ಹೊಸ ಗ್ರಿಲ್ ವಿನ್ಯಾಸ, ಹೊಸ ಎಲ್‌ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್‌, ಎರಡೂ ತುದಿಗಳಲ್ಲಿರುವ ಬಂಪರ್‌ಗಳು ಸೇರಿವೆ. ಹೊಸ ಎಲ್ಇಡಿ ಟೈಲ್-ಲ್ಯಾಂಪ್‌ಗಳನ್ನು ಸಹ ಹೊಂದಿದೆ.

Category

🗞
News

Recommended