ಟ್ರಯಂಫ್ ಮೋಟಾರ್‌ಸೈಕಲ್ ಕಂಪನಿಯು ತನ್ನ ಹೊಸ ರಾಕೆಟ್ 3 ಜಿಟಿ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 10ರಂದು ಬಿಡುಗಡೆಗೊಳಿಸಲಿದೆ. ಬಿಡುಗಡೆಯ ನಂತರ ಈ ಬೈಕ್ ಭಾರತದಲ್ಲಿ ಟ್ರಯಂಫ್ ಮೋಟಾರ್‌ಸೈಕಲ್‌ನ ಪ್ರಮುಖ ಮಾದರಿಯಾಗಲಿದೆ.
ಬಿಡುಗಡೆಯ ದಿನಾಂಕವನ್ನು ಘೋಷಿಸಿದ ನಂತರ ಕಂಪನಿಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಈ ಬೈಕಿನ ಹೊಸ ಟೀಸರ್ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಸದ್ಯಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಟ್ರಯಂಫ್ ರಾಕೆಟ್ 3 ಜಿಟಿ ಬೈಕಿನಲ್ಲಿರುವ ಎಲ್ಲಾ ಫೀಚರ್ ಗಳನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಬೈಕಿನಲ್ಲಿಯೂ ನೀಡುವ ನಿರೀಕ್ಷೆಗಳಿವೆ.
ಟ್ರಯಂಫ್ ಕಂಪನಿಯ ಗ್ರ್ಯಾಂಡ್ ಟೂರರ್ ಬೈಕ್ ಆದ ರಾಕೆಟ್ 3 ಜಿಟಿ ಬೈಕಿನಲ್ಲಿ ವಿಶಾಲವಾದ ಹ್ಯಾಂಡಲ್‌ಬಾರ್ ನೀಡಲಾಗಿದೆ. ಇದರ ಜೊತೆಗೆ ಬಾರ್-ಎಂಡ್ ಮಿರರ್ ಗಳನ್ನು ಸಹ ನೀಡಲಾಗಿದೆ.