Skip to playerSkip to main content
  • 4 months ago
ಶಿವಮೊಗ್ಗ: ಅಯೋಧ್ಯೆ ರಾಮ ಮಂದಿರದ ದೇಣಿಗೆ ಲೂಟಿಯಿಂದ ರಾಮ ಭಕ್ತರಿಗೆ ಆಘಾತವಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದ ಪ್ರೆಸ್ ಟ್ರಸ್ಟ್ ಭವನದಲ್ಲಿಂದು ಮಾತನಾಡಿದ ಅವರು, 500 ವರ್ಷದ ಹಿಂದೆ ಬಾಬರ್ ಶ್ರೀರಾಮ ಮಂದಿರವನ್ನು ಕೆಡವಿ ಬಾಬರಿ ಮಸೀದಿ ಕಟ್ಟಿದ್ದ. ಇದೀಗ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ. ರಾಮ ಭಕ್ತರು ನೀಡಿದ ಸಾವಿರಾರು ಕೋಟಿ ದೇಣಿಗೆಯಿಂದ ಮಂದಿರ ನಿರ್ಮಾಣವಾಗಿದೆ. ಈ ಘಟನೆಯಿಂದ ನಮಗೆ ಬಹಳ ನೋವಾಗಿದೆ. ಲೂಟಿಕೋರರನ್ನು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಮಂದಿರದ ಸಿಸಿಟಿವಿ ಕ್ಯಾಮರಾಗಳನ್ನು ತಿರುಚಲಾಗಿದೆ. 200 ಬೆಳ್ಳಿಯ ಇಟ್ಟಿಗೆಗಳು, ಬಂಗಾರ ನಾಪತ್ತೆಯಾಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಹಗುರವಾಗಿ ತೆಗೆದುಕೊಂಡಿಲ್ಲ. ರಾಮ ಮಂದಿರವನ್ನು ವಿರೋಧಿಸಿದ್ದವರು ಇಂದು ಲೂಟಿ ಬಗ್ಗೆ ಮಾತನಾಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.ಪುಣ್ಯಕ್ಷೇತ್ರದ ಮೇಲಿರುವ ನಂಬಿಕೆ ಕೆಡಿಸುವ ಪ್ರಯತ್ನ ನಡೆದಿದೆ. ಆದ್ದರಿಂದ ಅಕ್ರಮ ನಡೆಸಿದವರನ್ನು ಕೂಡಲೇ ಬಂಧಿಸಬೇಕು. ಮನೆಯಲ್ಲಿ ಯಾರೋ ಒಬ್ಬ ಕಳ್ಳತನ ಮಾಡಿದ್ರೆ ಇಡೀ ಕುಟುಂಬವನ್ನೇ ದೂಷಿಸಲು ಸಾಧ್ಯವಿಲ್ಲ. ಅದೇ ರೀತಿ ರಾಮ ಮಂದಿರ ವಿಚಾರದಲ್ಲಿ ಆರ್​​ಎಸ್​ಎಸ್, ಬಿಜೆಪಿಯನ್ನು ಎಳೆದು ತರುವುದು ಸರಿಯಿಲ್ಲ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲೇಬೇಕು ಎಂದರು. ಈ ವೇಳೆ ಕೆ.ಈ.ಕಾಂತೇಶ್ ಸೇರಿ ಮತ್ತಿತರರಿದ್ದರು.ಇವುಗಳನ್ನೂ ಓದಿ:ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನಅಯೋಧ್ಯೆ ಶ್ರೀರಾಮ ಮಂದಿರದ ದೇಣಿಗೆ ಪ್ರಕರಣ: ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

Category

🗞
News
Transcript
00:28What the
00:29This is the Ramabhaktur and the Ramabhaktur became deeply committed.
00:33They also have a total of 1.5 million people...
00:38...and the Ramabhaktur became deeply committed.
00:45In the case of the TV, the Ramabhaktur became very good.
01:01What is that?
01:02It is a bad thing.
01:02I should have done the right thing.
01:06What do you think is that the people are here?
01:08There are a lot of people who have been able to get the deeper and deeper, and they have
01:13been able to get the deeper and deeper.
01:17Who is here?
01:17People will be afraid to get the first one.
01:27In CCTV, the camera has been turned in the 60s.
01:38The 80s of the young people are the same.
01:47It is a very important thing to think about it.
02:00I would say that I would think that I would think that I would think that I would think that
02:10But in this view, there is no way to do this.
02:17The instrument of the Ram Mandra is made by the Raman Mandra,
02:24the looting is also made by the government.
02:35We thought that there was a lot of loot in the city, and we thought that there was a lot
02:48of loot in the city, and there was a lot of loot in the city.
03:00There was no one who would say that there was a lot of loot in the city. They had a
03:08lot of loot in the city. There were a lot of loot in the city.
03:19However, there was a lot of loot in the city of patients and there were a lot of loot in
03:28the city.
03:28That's why there was a lot of loot in the city.
03:41The answer is, we have to answer the question.

Recommended