Skip to playerSkip to main content
  • 2 weeks ago
ಮೈಸೂರು: ದಸರಾ ಗಜಪಡೆಯ ತಾಲೀಮು ಚುರುಕುಗೊಂಡಿದ್ದು, ಮಂಗಳವಾರ ಸುಗ್ರೀವ ಆನೆ ಎರಡನೇ ಬಾರಿಗೆ ಮರದ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಹೆಜ್ಜೆ ಹಾಕಿತು. ಮಂಗಳವಾರ ಸಂಜೆ ಯಶಸ್ವಿಯಾಗಿ ಒಂದೂವರೆ ಗಂಟೆಯಲ್ಲಿ ಬನ್ನಿಮಂಟಪ ತಲುಪುವ ಮೂಲಕ ನಾನೂ ಸಹ ಚಿನ್ನದ ಅಂಬಾರಿಯನ್ನು ಹೊರುವ ಸ್ಪರ್ಧೆಯಲ್ಲಿ ಇದ್ದೇನೆ ಎಂಬುದನ್ನು ಬಲಭೀಮ ಸುಗ್ರೀವ ಸಾಬೀತುಪಡಿಸಿದನು. ಮಧ್ಯಾಹ್ನ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಸುಗ್ರೀವನಿಗೆ ಗಾದಿ ಹಾಗೂ ನಮ್ದಾ ಬಿಗಿದ ಬಳಿಕ ಅಂಬಾರಿ ಕಟ್ಟುವ ಸ್ಥಳಕ್ಕೆ ಕರೆತರಲಾಯಿತು. ಅಲ್ಲಿ ಕ್ರೇನ್ ಮೂಲಕ 700 ಕೆ.ಜಿ ತೂಕದ ನಮ್ದಾ, ಗಾದಿ ಹಾಗೂ ಮರದ ಅಂಬಾರಿಯನ್ನು ಸುಗ್ರೀವ ಆನೆಗೆ ಹೊರೆಸಲಾಯಿತು. ಅರಮನೆಯಿಂದ ಹೊರಟ  44 ವರ್ಷದ ಸುಗ್ರೀವ ಆನೆಯು, ಕೆಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ ಮೂಲಕ ಹೆಜ್ಜೆ ಹಾಕಿ ಒಂದು ಗಂಟೆ ಮೂವತ್ತು ನಿಮಿಷದಲ್ಲಿ ಬನ್ನಿಮಂಟಪವನ್ನು ತಲುಪಿತು. ಆ ಮೂಲಕ ಎರಡನೇ ಬಾರಿ ಸುಗ್ರೀವ ಮರದ ಅಂಬಾರಿ ಹೊತ್ತು ಸೈ ಎನಿಸಿಕೊಂಡನು. ತಾಲೀಮಿನಲ್ಲಿ ಅಭಿಮನ್ಯು ಆನೆ: ತಾಲೀಮಿನಲ್ಲಿ ನಿಶಾನೆ ಆನೆ ಅಭಿಮನ್ಯು ವಿಶೇಷ ಗಮನ ಸೆಳೆದನು. ಅಂಬಾರಿ ಹೊತ್ತ ಸುಗ್ರೀವ ಮುನ್ನಡೆದರೆ, ಗಜಪಡೆಯ ಸಾಲಿನಲ್ಲಿ ನಾಲ್ಕನೇ ಆನೆಯಾಗಿ ಅಭಿಮನ್ಯು ಸಾಗಿದನು. ದಸರೆಗೆ ತಡವಾಗಿ ಆಗಮಿಸಿರುವ ಅಭಿಮನ್ಯುವನ್ನು ನೋಡಲು ರಾಜಬೀದಿಯುದ್ದಕ್ಕೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ಬಾರಿಯ ಜಂಬೂಸವಾರಿ ಮೆರವಣಿಗೆಯ ನೇತೃತ್ವವನ್ನು ವಹಿಸಲಿರುವ ಅಭಿಮನ್ಯು ನಿಶಾನೆ ಆನೆಯಾಗಿ ಮೊದಲು ಮೆರವಣಿಗೆಯಲ್ಲಿ ಸಾಗಲಿದೆ. ಇದನ್ನೂ ಓದಿ: ಮೈಸೂರು ದಸರಾ 2026: 13 ಆನೆಗಳು ಸೇರಿದಂತೆ ಅಶ್ವದಳಕ್ಕೆ ಮೊದಲ ಹಂತದ ಸಿಡಿಮದ್ದು ತಾಲೀಮು ಯಶಸ್ವಿ

Category

🗞
News
Transcript
00:00I am the king.
00:04The king.
00:07The king.
00:10The king.
00:20The king.
00:48I'm hoping that.
00:58Oh
01:04Oh

Recommended