Skip to playerSkip to main content
  • 1 week ago
ಮಂಡ್ಯ: ಜಿಲ್ಲೆಯ ಕುಟುಂಬವೊಂದು ಕಳೆದ 40 ವರ್ಷಗಳಿಂದ ನವರಾತ್ರಿ ಸಮಯದಲ್ಲಿ ಅಂದದ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುವ ಮೂಲಕ ಗಮನ ಸೆಳೆಯುತ್ತಿದೆ.  ಶ್ರೀರಂಗಪಟ್ಟಣದ ಲಕ್ಷ್ಮೀದೇವಿ ದೇಗುಲದ ಅರ್ಚಕ ಕೃಷ್ಣಭಟ್ ಶರ್ಮಾ ಮತ್ತು ಅವರ ಪತ್ನಿ ಸರ್ವಮಂಗಳಾ ಗೊಂಬೆ ಕೂರಿಸುವ ಸಂಪ್ರದಾಯ ಆಚರಿಸಿಕೊಂಡು ಬರುತ್ತಿರುವ ದಂಪತಿ. ಇತ್ತೀಚೆಗೆ ಗೊಂಬೆ ಕೂರಿಸುವ ಸಂಪ್ರದಾಯ ಕಣ್ಮರೆ ಆಗುತ್ತಿದೆಯಾದರೂ ಕೆಲವೊಂದು ಕುಟುಂಬಗಳು ಇಂದಿಗೂ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿವೆ ಎನ್ನುವುದಕ್ಕೆ ಈ ಕುಟುಂಬವೇ ಸಾಕ್ಷಿ ಆಗಿದೆ.ಇವರ ಮನೆಯಲ್ಲಿ ಬಗೆ ಬಗೆಯ ಸುಮಾರು 3 ಸಾವಿರಕ್ಕೂ ಹೆಚ್ಚು ಮಾದರಿಯ ಗೊಂಬೆಗಳಿದ್ದು, ಇವುಗಳ ಮೌಲ್ಯ 60 ಲಕ್ಷ ದಾಟಿದೆ. ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಇವರ ಮನೆಯಲ್ಲಿ ಈ ಗೊಂಬೆಗಳನ್ನು ಅಲಂಕಾರ ಮಾಡಿ ಕೂರಿಸಿ ಪ್ರದರ್ಶನ ಏರ್ಪಡಿಸುತ್ತಾ ಬರುತ್ತಿದ್ದಾರೆ. ಗೊಂಬೆಗಳನ್ನು ನೋಡಲು ಬಂದ ಪ್ರವಾಸಿಗರು ಮಾತನಾಡಿ, ಕಳೆದ ಹಲವು ವರ್ಷಗಳಿಂದ ಗೊಂಬೆಗಳನ್ನು ಕೂರಿಸುವ ಮೂಲಕ ಹಾಗೂ ಅವುಗಳ ಪ್ರದರ್ಶನವನ್ನು ಏರ್ಪಡಿಸುತ್ತಾ ಬರುತ್ತಿರುವುದರಿಂದ ಅರ್ಚಕ ಕೃಷ್ಣಭಟ್ ಶರ್ಮಾ ಅವರ ಮನೆಯನ್ನು ಬೊಂಬೆಮನೆ ಅಂತಲೇ ಕರೆಯುತ್ತಾರೆ. ಅಷ್ಟು ಪ್ರಸಿದ್ಧಿ ಹೊಂದಿದೆ. ಇವರ ಮನೆಯಲ್ಲಿ ಪ್ರತಿ ವರ್ಷ ಕೂರಿಸುವ ಬೊಂಬೆ ಪ್ರದರ್ಶನಕ್ಕೆ ಸ್ಥಳೀಯರು ಸೇರಿದಂತೆ ಸುತ್ತಮುತ್ತಲ ಗ್ರಾಮದ ನೂರಾರು ಜನರು ನವರಾತ್ರಿಯ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಇಲ್ಲಿನ ಗೊಂಬೆಗಳನ್ನು ಕಂಡು ಸಂಭ್ರಮಿಸುತ್ತಾರೆ. ಅಲ್ಲದೆ ಇಲ್ಲಿನ ಗೊಂಬೆಗಳ ಅಲಂಕಾರ ಕಂಡು ಸೆಲ್ಪಿ ಕೂಡ ತೆಗೆದುಕೊಳ್ಳುತ್ತಾರೆ ಎಂದು ಖುಷಿ ಹಂಚಿಕೊಂಡರು. ಅರ್ಚಕರ ಮನೆಯಲ್ಲಿ ಕೂರಿಸುವ ಗೊಂಬೆಗಳು ಒಂದಕ್ಕಿಂತ ಒಂದು ಸುಂದರವಾಗಿವೆ. ಗೊಂಬೆ ಪ್ರದರ್ಶನದಲ್ಲಿ ಪುರಾತನ ಕಾಲದ ಆಟಿಕೆ ಪ್ರತಿಕೃತಿ, ನವದುರ್ಗೆಯರ ಅವತಾರ ಸೇರಿ ಇಂದಿನ ಕಾಲದ ಮೊಬೈಲ್, ಕಂಪ್ಯೂಟರ್ ಅಂತಹ ಮಾಡರ್ನ್​ ಪ್ರತಿಕೃತಿಯ ಆಟಿಕೆಗಳು ಇವೆ. ಎಲ್ಲಕ್ಕಿಂತ ಹೆಚ್ಚಾಗಿ ಗೊಂಬೆ ಪ್ರದರ್ಶನದಲ್ಲಿ ವಿಷ್ಣುವಿನ ದಶಾವತಾರ, ತಿರುಪತಿ ತಿಮ್ಮಪ್ಪ ಹಾಗೂ ಪದ್ಮಾವತಿ ದೇವರದ ಪ್ರತಿಕೃತಿ ವಿಗ್ರಹ ಹೆಚ್ಚು ಆಕರ್ಷಣೀಯವಾಗಿವೆ. ಜಂಜೂ ಸವಾರಿ ಮೆರವಣಿಗೆ, ದರ್ಬಾರ್ ಹಾಲ್​ನ ಮಾಡೆಲ್ ಎಲ್ಲರ ಗಮನ ಸೆಳೆಯುತ್ತಿವೆ ಎನ್ನುತ್ತಾರೆ ಸ್ಥಳೀಯರು. ಕೃಷ್ಣಭಟ್ ಶರ್ಮಾ ದಂಪತಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಮೈಸೂರು ಅರಮನೆಯ ಸಂಪ್ರದಾಯದಂತೆ ನಮ್ಮ ಮನೆಯಲ್ಲಿ ಗೊಂಬೆಗಳ ಪ್ರದರ್ಶನ ಏರ್ಪಡಿದ್ದೇವೆ. ಸಾವಿರಾರು ಗೊಂಬೆಗಳನ್ನು ಇಡಲಾಗಿದ್ದು, ಆ ಎಲ್ಲಾ ಗೊಂಬೆಗಳಿಗೆ ಅಲಂಕಾರ ಮಾಡಲಾಗಿದೆ. ಸುಮಾರು 40 ವರ್ಷಗಳಿಂದ ಈ ಗೊಂಬೆ ಪ್ರದರ್ಶವನ್ನು ಏರ್ಪಡಿಸಿಕೊಂಡು ಬರುತ್ತಿದ್ದೇವೆ. ಈ ಸಂಪ್ರದಾಯ ಇನ್ನೊಬ್ಬರಿಗೂ ಪ್ರೇರಣೆ ಆಗಲಿ ಎನ್ನುವುದು ನಮ್ಮ ಆಸೆ. ಹಾಗಾಗಿ ಎಲ್ಲರೂ ಬಂದು ಈ ಗೊಂಬೆಗಳನ್ನು ವೀಕ್ಷಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುವಂತೆ ಮನವಿ ಮಾಡಿದರು. ಇದನ್ನೂ ಓದಿ: ಮೈಸೂರು ದಸರಾದಲ್ಲಿ ವಿಂಟೇಜ್ ಕಾರು, ಬೈಕ್​ಗಳ ಝಲಕ್

Category

🗞
News
Transcript
00:02This is a production of Mishra, and I am a part of the production of Mishra.
00:27We also have a group of people who are listening to this group of Gombayas.
00:35They are doing this group of Gombayas.
00:38They are doing this group of Gombayas.
00:49We are doing these group of Gombayas.
00:56The people who are watching this video are watching this video and they are watching this video.
01:27we have to send the message to our members to the feel.
01:30We see that the information is taken away by the people of Baamme.
01:33We know that the population is more than 10.
01:34However, the people of Baamme is not able to get the message.
01:37We know that it has come from another country and we know that the people of Baamme.
01:46It is also a community that is not working.
01:47We have a lot of people who have been working as well as we have an American community.
01:54If there is a lot of people who are in the country,
01:57We are happy to have you.
02:01We are happy to have you, and you are happy to have you, and we are happy to have you.
02:08There are many people who have come.
02:09We are also known for a lot of people.
02:11Darshaavthara Vishnu, Darshaavthara, Ashtalakshmi, Saptamaatrikheeru, Navadurgeeru
02:18These are the most valuable Pooja in Navarathri
02:21These are the most valuable Pooja in Navarathri
02:24These are the most valuable Pooja in Navarathri
02:25They are the most valuable Pooja
02:32The most valuable Pooja in Navarathri
02:38This is the most valuable Pooja in Navarathri
02:40On theênKhanshmi is the most valuable Pooja in Navarathri
02:45The of the Jodi, and of the Pahavathi and of the Devarata
02:51And they have the most valuable Pooja in Navarathri
02:57That is the most valuable that we also acquired this property
03:02Thank you so much for watching.

Recommended