Skip to playerSkip to main content
  • 11 minutes ago
ಮೈಸೂರು: ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆ ಎರಡು‌ ದಿನ ಮಾತ್ರ ಬಾಕಿ ಇದ್ದು, ಸೋಮವಾರ ಅರಮನೆಯ ಜಂಬೂ ಸವಾರಿ ಪುಷ್ಪಾರ್ಚನೆ ಮಾಡುವ ಸ್ಥಳದಿಂದ ಎರಡನೇ ಬಾರಿಗೆ ಜಂಬೂ ಸವಾರಿ ತಾಲೀಮು ನಡೆಸಲಾಯಿತು.ಎರಡನೇ ತಾಲೀಮಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅರಮನೆ ಮುಂಭಾಗ ನೆಲದ ಮೇಲೆ ನಿಂತು ಮೊದಲು ಅಭಿಮನ್ಯು ಆನೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಪ್ರಶಾಂತ ಆನೆಗೆ ಪುಷ್ಪಾರ್ಚನೆ ನೆರವೇರಿಸಿದರು.ಎರಡನೇ ತಾಲೀಮಿನಲ್ಲಿ ಮೊದಲು ನಿಶಾನೆ ಆನೆ ಅಭಿಮನ್ಯು, ನಂತರ ನೌಪತ್ ಆನೆ ಬಳಿಕ ಸಾಲಾನೆಗಳು ಮೆರವಣಿಗೆಯ ರೀತಿ ತಾಲೀಮು ನಡೆಸಲಾಯಿತು. ಈ ತಾಲೀಮಿನಲ್ಲಿ ಗಜಪಡೆ, ಅಶ್ವ ಪಡೆ, ಕಲಾ ತಂಡ, ಪೊಲೀಸ್ ಬ್ಯಾಂಡ್ ಭಾಗವಹಿಸಿದ್ದವು.ಪುಷ್ಪಾರ್ಚಾನೆ ತಾಲೀಮು: ಅರಮನೆಯ ಪುಷ್ಪಾರ್ಚನೆ ಮಾಡುವ ಸ್ಥಳಕ್ಕೆ ಬರುತ್ತಿದ್ದಂತೆ ಅಶ್ವಪಡೆಯ ಕಮಾಂಡರ್ ರಾಷ್ಟ್ರಗೀತೆ ನುಡಿಸಲು ಹಾಗೂ ಪುಷ್ಪಾರ್ಚನೆ ಮಾಡಲು ಅನುಮತಿ ಪಡೆದರು. ಅನುಮತಿ ಬಳಿಕ ರಾಷ್ಟ್ರಗೀತೆ ನುಡಿಸಿದರು. ಬಳಿಕ ಅರಮನೆ ಹೊರೆಗೆ 21 ಸುತ್ತು ಕುಶಲ ತೋಪು ನೆರೆವೇರಿಸುವ ತಾಲೀಮು ನಡೆಸಲಾಯಿತು. ಬುಧವಾರ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.ಅ.​ 21ರಂದು ಸಂಜೆ 4:10ರಿಂದ 4:35ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಗಣ್ಯರು ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.ಇದನ್ನೂ ಓದಿ: ಮೈಸೂರು ಅರಮನೆ ಆವರಣದಲ್ಲಿ ದಸರಾ ಜಂಬೂ ಸವಾರಿ ರಿಹರ್ಸಲ್: ವಿಡಿಯೋ

Category

🗞
News
Transcript
00:00.
00:38I don't know what to do.
01:00There, there, there, there!
01:30There, there, there!

Recommended