Skip to playerSkip to main content
  • 4 minutes ago
ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಗೆ ಗಜಪಡೆ, ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳು ಸಿದ್ಧವಾಗಿದ್ದು, ಈ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ.ಜಂಬೂ ಸವಾರಿ ಮೆರವಣಿಗೆಗೆ ಮೈಸೂರು ಅಂಬಾ ವಿಲಾಸ ಅರಮನೆ ಸಂಪೂರ್ಣ ಸಜ್ಜಾಗಿದೆ. ಕ್ಯಾಪ್ಟನ್​ ಪ್ರಶಾಂತ ಆನೆ ನೇತೃತ್ವದ ಗಜಪಡೆಯನ್ನು ಸನ್ನದ್ಧಗೊಳಿಸಲಾಗಿದೆ. ಗಜಪಡೆಗಳ ಕಿವಿಗೆ ಶಂಖ, ಸೊಂಡಿಲಿಗೆ ಗಂಡುಬೇರುಂಡ, ಕಾಲುಗಳಿಗೆ ಎಲೆಯ ಆಕಾರದ ಚಿತ್ರಗಳನ್ನು ಬಿಡಿಸುವ ಮೂಲಕ ಸಿಂಗಾರಗೊಳಿಸಲಾಗಿದೆ.ಜಂಬೂ ಸವಾರಿ ಮೆರವಣಿಗೆಗೆ ಮತ್ತೊಂದು ಕಡೆ 48 ಕಲಾ ತಂಡಗಳು ರಂಗು ತರಲಿದ್ದು, ಮೊದಲ ಬಾರಿಗೆ ಹೊರ ರಾಜ್ಯಗಳ ಏಳು ಕಲಾತಂಡಗಳು ಹಾಗೂ 53 ವಿವಿಧ ಸ್ತಬ್ಧ ಚಿತ್ರಗಳು ಭಾಗವಹಿಸುತ್ತಿವೆ. ಮುಖ್ಯವಾಗಿ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಾಧನೆಯ ಜೊತೆಗೆ ವಿವಿಧ ರೀತಿಯ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಇರಲಿವೆ.ಜಂಬೂ ಸವಾರಿಗೆ ಕ್ಷಣಗಣನೆ: ಇಂದು ಸಂಜೆ 4:10ರಿಂದ 4:35ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಉತ್ಸವಮೂರ್ತಿಗೆ ಸಿಎಂ ಡಿ.ಕೆ.ಶಿವಕುಮಾರ್, ಇತರ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಶುಭಾರಂಭಗೊಳ್ಳಲಿದೆ.

Category

🗞
News
Transcript
00:08This video is brought to you by the National Anthem.

Recommended