Skip to playerSkip to main content
  • 2 hours ago
ಬಾಗಲಕೋಟೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್​) ವತಿಯಿಂದ ಭಾನುವಾರ ನಗರದಲ್ಲಿ ನಡೆದ ಪಥಸಂಚಲನ ಗಮನ ಸೆಳೆಯಿತು.ಪಥಸಂಚಲನ ಹಿನ್ನೆಲೆಯಲ್ಲಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗಣವೇಷಧಾರಿಗಳನ್ನು ಸ್ವಾಗತಿಸಲು ವಿವಿಧೆಡೆ ಕೇಸರಿ ಧ್ವಜಗಳು, ಬ್ಯಾನರ್‌ಗಳು, ಕಟೌಟ್‌ಗಳು, ರಂಗೋಲಿ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಹಲವು ಪ್ರದೇಶಗಳು ಕೇಸರಿಮಯವಾಗಿ ಕಂಗೊಳಿಸಿದವು.ನಗರದಲ್ಲಿ ಪಥಸಂಚಲನಕ್ಕಾಗಿ ಎರಡು ಮಾರ್ಗಗಳನ್ನು ನಿಗದಿಪಡಿಸಲಾಗಿತ್ತು. ಬಸವೇಶ್ವರ ಕಾಲೇಜು ಮೈದಾನದಿಂದ ಸಂಜೆ 4 ಗಂಟೆಗೆ ಆರಂಭವಾದ ಗಣವೇಷಧಾರಿಗಳ ಪಥಸಂಚಲನ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಸೇರಿ ವೀಕ್ಷಿಸಿದರು. ಚಿಕ್ಕ ಮಕ್ಕಳಿಗೆ ದೇಶಭಕ್ತರು ಹಾಗೂ ಮಹಾಪುರುಷರ ವೇಷಭೂಷಣ ತೊಡಿಸಿ ಸ್ವಾಗತಿಸಲಾಯಿತು. ಪಥಸಂಚಲನದ ಸಂದರ್ಭದಲ್ಲಿ ಭಗವಾಧ್ವಜಗಳು ರಾರಾಜಿಸಿದವು. ದೇಶಭಕ್ತಿಯನ್ನು ಸಾರುವ ಘೋಷಣೆಗಳು ಮೊಳಗಿದವು.ವಿಜಯದಶಮಿ ಉತ್ಸವದ ಅಂಗವಾಗಿ ನಡೆಯುವ ಆರ್‌ಎಸ್‌ಎಸ್‌ ಪಥಸಂಚಲನ ವೀಕ್ಷಿಸಲು ಬಾಗಲಕೋಟೆ ನಗರದ ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ಆಗಮಿಸಿದ್ದರು.ಪಥಸಂಚಲನದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಂತರ ಬಸವೇಶ್ವರ ಕಾಲೇಜು ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಜ್ಞಾಪ್ರವಾಹ ರಘುನಂದನ ಮಾತನಾಡಿ, "ಮುಂದಿನ ನೂರು ವರ್ಷಗಳಲ್ಲಿ ಭಾರತವು ಜಗತ್ತಿನ ಮಾರ್ಗದರ್ಶಕ ರಾಷ್ಟ್ರವಾಗಿ ಹೊರಹೊಮ್ಮಬೇಕು. ಶ್ರೀಮಂತಿಕೆ, ಸಂಸ್ಕೃತಿ ಮತ್ತು ಶಕ್ತಿಯಲ್ಲಿ ಭಾರತವು ಜಗತ್ತಿಗೆ ಮಾದರಿಯಾಗಬೇಕು ಎಂಬ ಸಂಕಲ್ಪವನ್ನು ಪ್ರತಿಯೊಬ್ಬ ಭಾರತೀಯ ಮಾಡಬೇಕು" ಎಂದು ಕರೆ ನೀಡಿದರು.ಇದನ್ನೂ ಓದಿ: ಕಿತ್ತೂರಿನಲ್ಲಿ‌ ಫ್ರೀಡಂ ಪಾರ್ಕ್ ನಿರ್ಮಾಣ: ಶಾಸಕ ಬಾಬಾಸಾಹೇಬ ಪಾಟೀಲ್ ಬೇಡಿಕೆಗೆ ಕಿತ್ತೂರು ಉತ್ಸವದಲ್ಲಿ ಅಸ್ತು ಎಂದ ಸಿಎಂ ಡಿಕೆಶಿ

Category

🗞
News
Transcript
00:00I

Recommended