Skip to playerSkip to main content
  • 5 hours ago
ಚಿಕ್ಕಬಳ್ಳಾಪುರ: "ರಾಜ್ಯ ಸರ್ಕಾರವು ಸ್ಟಿಂಗ್​​​ ಆಪರೇಷನ್​​ ಬಗ್ಗೆ ತನಿಖೆ ನಡೆಸಿ, ಇದಕ್ಕೆ ಅಂತ್ಯ ಹಾಡಬೇಕು. ಸುಮಾರು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸುಳ್ಳು ಎಂದು ಹೇಳಿದ ಪ್ರಕರಣವನ್ನು ಹಾದಿ ಬೀದಿಯಲ್ಲಿ ಚರ್ಚೆ ಮಾಡಿ ಅವರ ಚಾರಿತ್ರವಧೆ ಮಾಡುವುದು ಬೇಡ. ಹೀಗಾಗಿ ತನಿಖೆಗೆ ಆದೇಶ ಮಾಡಿ ಈ ಪ್ರಕರಣಕ್ಕೆ ಅಂತ್ಯ ಹಾಡಬೇಕು" ಎಂದು ಮಾಜಿ ಸಂಸದ ಪ್ರತಾಪ್​ ಸಿಂಹ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.ಅವರು ನಗರದ ಸರ್ಕಾರಿ ಪಾಲಿಟೆಕ್ನಿಕ್​ ಮೈದಾನದಲ್ಲಿ ಆಯೋಜಿಸಿರುವ ನವರಾತ್ರಿ ಉತ್ಸವಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು."ರಾಜ್ಯವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ ಬರ. ರಾಜ್ಯದ ಬಹುತೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ನಿರುದ್ಯೋಗ ಭತ್ಯೆ ನೀಡುತ್ತಿಲ್ಲ, ಯುವನಿಧಿ ಪ್ರಾರಂಭ ಮಾಡಿಲ್ಲ, ಖಾಲಿ ಹುದ್ದೆಗಳ ಭರ್ತಿ ಮಾಡಲಿಲ್ಲ, ಹಳೆಯ ಪೆನ್ಷನ್ ಸ್ಕೀಂ ತರುತ್ತೇವೆ ಎಂದು ಭರವಸೆ ನೀಡಿದ್ದರೂ ಜಾರಿಯಾಗಿಲ್ಲ. ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಸೂಕ್ತ ವೇತನ ನೀಡುತ್ತಿಲ್ಲ, ರಾಜ್ಯದಲ್ಲಿ ಒಂದೂ ರಸ್ತೆಯೂ ಸರಿಯಾಗಿಲ್ಲ. ಇಂತಹ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮಾಡದೆ ಕೆಲಸಕ್ಕೆ ಬಾರದ ವಿಷಯದ ಕುರಿತು ಪ್ರತಿನಿತ್ಯ ಚರ್ಚೆ ನಡೆಸುತ್ತಿರುವುದು ಅಸಹನೀಯ" ಎಂದರು."ಸರ್ಕಾರಿ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇನತರ ವೇತನ ಸಕಾಲಕ್ಕೆ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಡಿ.ಕೆ. ಶಿವಕುಮಾರ್​ ಸಭೆ ಸಮಾರಂಭಗಳಲ್ಲಿ ಜನರ ಭಾವನೆ ಮುಖ್ಯವಲ್ಲ, ಬದುಕು ಮುಖ್ಯ ಎಂದು ಹೇಳುತ್ತಾರೆ. ಬದುಕನ್ನು ಸುಧಾರಿಸಲು ಏನು ಮಾಡಿದ್ದೀರಿ? ಬರೀ ವೇದಾಂತಿತರ ಭಾಷಣ ಮಾಡುತ್ತಿದ್ದೀರಿ" ಎಂದು ಪ್ರಶ್ನಿಸಿದರು."ಸಿದ್ದರಾಮಯ್ಯನವರಿಗೆ 45 ವರ್ಷಗಳ ರಾಜಕೀಯ ಇತಿಹಾಸವಿದೆ. ಅವರ ವಿರುದ್ಧ ಕೇಳಿ ಬರುತ್ತಿರುವ ಆರೋಪದ ವಿರುದ್ಧ ದೂರು ನೀಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಸಹ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ರಾಜಕೀಯವಾಗಿ, ಸೈದ್ಧಾಂತಿಕವಾಗಿ, ವೈಚಾರಿಕವಾಗಿ ನಮಗೆ ವಿರೋಧಿಗಳು. ನಾವು ಅದೇ ವಿಷಯಗಳ ಕುರಿತು ವಿರೋಧಿಸುತ್ತೇವೆ. ಆದರೆ ವೈಯಕ್ತಿಕವಾಗಿ ವಿರೋಧಿಸುವುದಿಲ್ಲ. ಕೆಲಸಕ್ಕೆ ಬಾರದ ವಿಷಯದ ಕುರಿತು ಚರ್ಚಿಸುವುದು ಖಂಡನೀಯ" ಎಂದು ಆಕ್ರೋಶ ವ್ಯಕ್ತಪಡಿಸಿದರು."ನೈತಿಕತೆ ಖಾಸಗಿ ಬದುಕಿಗೆ ಮಾತ್ರ ಸೀಮಿತವಾಗಿಲ್ಲ. ಭ್ರಷ್ಟಾಚಾರ, ಆಡಳಿತ ಮಾಡುವುದು, ಲಂಚ ಹೊಡೆಯುವುದು, ಜನರ ಕಷ್ಟಕ್ಕೆ ಸ್ಪಂದಿಸದಿರುವುದು ಅನೈತಿಕ ಆಗುವುದಿಲ್ಲವೇ? ಈ ಅನೈತಿಕತೆ ಬಗ್ಗೆ ಚರ್ಚೆ ನಡೆಯಲಿ. ಮಾಧ್ಯಮದವರೂ ಸಹ ಸದಾ ಅದರ ಬಗ್ಗೆ ಪ್ರಶ್ನೆ ಕೇಳುವುದನ್ನು ಬಿಡಬೇಕು. ಮುಖ್ಯಮಂತ್ರಿ ತನಿಖೆಗೆ ಆದೇಶ ನೀಡಿ, ಈ ವಿಷಯಕ್ಕೆ ಮುಕ್ತಾಯ ಹಾಡಬೇಕು" ಎಂದು ಮಾಜಿ ಸಂಸದರು ಆಗ್ರಹಿಸಿದರು.  ಇದನ್ನೂ ಓದಿ: ಕಾಂಗ್ರೆಸ್ ಹುತ್ತದಲ್ಲಿ ಆಗುತ್ತಿರುವ ಬೆಳವಣಿಗೆ ನೋಡ್ತಿದ್ರೆ, ಮೂರನೇ ಸಿಎಂ ಬರಬಹುದು, ನಾಲ್ಕನೇ ಸಿಎಂ ಬರಬಹುದು: ಛಲವಾದಿ ನಾರಾಯಣಸ್ವಾಮಿ

Category

🗞
News
Transcript
00:01Siddhramayin O'Ru Raja Vanna Sariswumaaru 8 years ago.
00:08He had a complaint from me.
00:16Kumar Swami O'Ru Kuda.
00:20The Prime Minister BK Shukumaru.
00:26This is the first TV series of TV series.
00:34I have been here for 5 years, and I have been here for 5 years.
00:40I have been here for 45 years.
00:47The government was related to the government's own political sector.
00:56Let's get started in the process.
00:57The government's mind is in the same way that it does not even matter.
01:00The government is still working.
01:06is
01:20he
01:25a
01:33young
01:34We have come to say that this is the goal of the people of Shukumar in the religion that we
01:40must find our roots in our society.
01:43They may not have terms of people and the state of Shukumar in our religion but in our religion.
01:51We discuss about these fundamental beliefs.
02:24Thank you very much.

Recommended