Skip to playerSkip to main content
  • 4 minutes ago
ಶಿವಮೊಗ್ಗ: ಹಾಲು ಮತ್ತು ಬಸ್ ದರ ಏರಿಕೆ ಖಂಡಿಸಿ‌ ರಾಷ್ಟ್ರಭಕ್ತರ ಬಳಗದ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಯಿತು‌.‌ ದೈವಜ್ಞ ಕಲ್ಯಾಣ ಮಂದಿರದಿಂದ ಟಿ.ಶೀನಪ್ಪ ಶೆಟ್ಟಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಹಾಕಿದ ಕಾರ್ಯಕರ್ತರು, ಜೀವನಾವಶ್ಯಕ ವಸ್ತುಗಳ ದರ ಏರಿಕೆ ಮಾಡಿ, ಜನ‌ಸಾಮಾನ್ಯರು ಜೀವನ ನಡೆಸುವುದನ್ನೇ ಬಿಡಬೇಕು ಎನ್ನುವಷ್ಟರ ಮಟ್ಟಿಗೆ ಮಾಡಲಾಗಿದೆ.‌ ತಕ್ಷಣ ಹಾಲು, ಬಸ್ ದರ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು. ಇದೇ ವೇಳೆ, ಸರ್ಕಾರ ಹಾಲಿನ ದರ ಏರಿಸಿ, ಬಡವರ ಮಕ್ಕಳು ಹಾಲು ಕುಡಿಯದಂತೆ ಮಾಡಿದೆ ಎಂದು ಮಕ್ಕಳಿಗೆ ಹಾಲಿನ ಪ್ಯಾಕೇಟ್ ನೀಡಿದರು. ಈ ವೇಳೆ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಹಾಲು, ಮೊಸಲು, ತುಪ್ಪದ ದರ ಸಹ ಏರಿಕೆ‌ ಆಗಿದೆ. ಬಸ್ ಸೇರಿದಂತೆ ಸರ್ಕಾರ ಎಲ್ಲದರ ದರ ಏರಿಕೆ ಮಾಡುತ್ತಿದೆ. ಕೇಳಿದರೆ ಅನಿವಾರ್ಯ ಎನ್ನುತ್ತಿದ್ದಾರೆ. ಬಸ್​ಗಳಿಗೆ ಡೀಸೆಲ್​ ಹಾಕಲು ದುಡ್ಡಿಲ್ಲ ಅಂತ ಕೇಳುತ್ತಿದ್ದಾರೆ. ಹಾಗೆಯೇ ಗಾಳಿಯಲ್ಲಿ, ನೀರಿನಲ್ಲಿ ಬೈಕ್ ಓಡಿಸೋಕೆ ಆಗುತ್ತಾ ಅಂತಲೂ ಹೇಳುತ್ತಿದ್ದಾರೆ. ಗ್ಯಾರಂಟಿಗಳನ್ನು ನೀಡುವಂತೆ ನಿಮ್ಮನ್ನು ಯಾರು ಕೇಳಿದ್ದರು? ನಿಮ್ಮ‌ ಫ್ರೀ ಯೋಜನೆಗಳು ಜನರಿಗೆ ಇಷ್ಟವಾಗಿದ್ದರೆ ತಕ್ಷಣ ವಿಧಾನಸಭೆ ವಿಸರ್ಜನೆ‌ ಮಾಡಿ ಚುನಾವಣೆಗೆ ಹೋಗಿ ಎಂದರು. ಎಲ್ಲಿ ಹೋದರೂ ಜನ ರಾಜ್ಯ ಸರ್ಕಾರವನ್ನು ತೆಗಳುತ್ತಿದ್ದಾರೆ. ಶಿಕ್ಷಕರ ಮತ್ತು ಪದವಿಧರರ ಚುನಾವಣೆಯಲ್ಲಿ ಏನು ಮಾಡಬೇಕೆಂದು ಈಗಾಗಲೇ ತೋರಿಸಿಕೊಟ್ಟಿದ್ದಾರೆ.‌ ಚುನಾವಣೆಯಾದರೆ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರವೇ ಇರುವುದಿಲ್ಲ. ಈಗಾಗಲೇ ಪಾಪರ್​ ಆಗಿದೆ. ಜನ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಿರಿಯೂರು ಉಪಚುನಾವಣೆ ಒಳಗೆ ಆಡಳಿತ ಸುಧಾರಿಸಿಕೊಂಡರೆ ಒಳ್ಳೆಯದು ಎಂದು ಕಿಡಿಕಾರಿದರು. ಇದನ್ನೂ ಓದಿ: ದರ ಏರಿಕೆ ಖಂಡಿಸಿ ರಾಜ್ಯದ ವಿವಿಧೆಡೆ ಬಿಜೆಪಿ ಪ್ರತಿಭಟನೆ: ಮೆಜೆಸ್ಟಿಕ್​ನಲ್ಲಿ ಭಿಕ್ಷಾಪಾತ್ರೆ ಹಿಡಿದು ಆಕ್ರೋಶ

Category

🗞
News
Transcript
00:00Good morning, I am a proud uncle of the National council under the hands of the ally of humanity.
00:06I am a proud uncle of you, and now I am proud of you, and now I will kiss you.
00:16Me and I are the only ones of all of you who have been downstairs.
00:23I am proud of you, I am proud of you and my dear friends.
00:31My son, my son, and my son.
00:35I tell you the influence you're doing.
00:43Janay, but paying for this change.
00:47To give a trip to you, you're driving a car, you're driving a car.
00:54You're trying to drive a car.
00:55You're trying to drive a car.
Comments

Recommended