ಹಾಸನ: ನಗರದ ಹೃದಯಭಾಗವಾದ ಎನ್.ಆರ್. ವೃತ್ತದಲ್ಲಿ ಹೊಯ್ಸಳರ ಭವ್ಯ ಲಾಂಛನವನ್ನು ಸ್ಥಾಪಿಸುವುದರ ಜೊತೆಗೆ, ಆಂಗ್ಲೀಕರಣಗೊಂಡಿರುವ ಹಾಸನ ನಗರದ ಹೆಸರನ್ನು ಕನ್ನಡದ ಉಚ್ಚಾರಣೆಗೆ ಅನುಗುಣವಾಗಿ 'Hassan' ಬದಲಿಗೆ 'HAASANA' ಎಂದು ಬದಲಾಯಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಹಾಸನಾಂಬ ಹಿತರಕ್ಷಣಾ ಸಮಿತಿಯವರು ಮನವಿ ಸಲ್ಲಿಸಿದರು.ಸಚಿವರನ್ನು ಭೇಟಿ ಮಾಡಿದ ನಿಯೋಗವು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಈ ಕುರಿತು ಮನವಿ ಮಾಡಿತು. ಹಾಸನದ ಐತಿಹಾಸಿಕ ಹಿನ್ನೆಲೆ, ಹೊಯ್ಸಳರ ವೈಭವ ಹಾಗೂ ಕನ್ನಡ ಭಾಷೆಯ ಅಸ್ಮಿತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಯತೀಶ್, ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಡಾ. ಬಷೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಮನವಿಗೆ ಸ್ಪಂದಿಸಿದ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು, ಭಾನುವಾರ ಕರ್ನಾಟಕ ರಾಜ್ಯೋತ್ಸವದ ಭಾಷಣದಲ್ಲಿ ಎನ್.ಆರ್.ವೃತ್ತದಲ್ಲಿ ಹೊಯ್ಸಳರ ಲಾಂಛನ ಸ್ಥಾಪಿಸುವ ಕುರಿತು ಪ್ರಸ್ತಾಪಿಸುವುದಾಗಿ ತಿಳಿಸಿದರು. ಅಲ್ಲದೆ, ಹಾಸನ ನಗರದ ಹೆಸರನ್ನು ಕನ್ನಡೀಕರಣಗೊಳಿಸುವ ಪ್ರಯತ್ನವನ್ನು ಸರ್ಕಾರದ ಮಟ್ಟದಲ್ಲಿ ನಡೆಸಲಾಗುವುದು ಎಂದು ಭರವಸೆ ನೀಡಿದರು.ಇದನ್ನೂ ನೋಡಿ: ಕಾಗೋಡು ತಿಮ್ಮಪ್ಪನವರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ: ಸಿಎಂ ಜೊತೆ ವಿಡಿಯೋ ಕಾಲ್ನಲ್ಲಿ ಮಾತು
Comments