Skip to playerSkip to main content
  • 2 months ago
ಚಿಕ್ಕೋಡಿ: ಅಥಣಿ ಪಟ್ಟಣದಲ್ಲಿ ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಅರವಿಂದರಾವ್ ದೇಶಪಾಂಡೆ ಅವರು ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. ಅಪಘಾತದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಕಳೆದ ಎರಡು ದಿನಗಳ ಹಿಂದೆ ಅಥಣಿ ಪಟ್ಟಣದ ವ್ಯಾಪ್ತಿಯಲ್ಲಿ ಸಂಜೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಅರವಿಂದರಾವ್ ದೇಶಪಾಂಡೆ ಅವರು ರಸ್ತೆಯ ಬದಿಯಲ್ಲಿ ನಿಂತಿದ್ದ ಕಾರಿನಲ್ಲಿದ್ದ ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದರು. ಇದೇ ವೇಳೆ ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನ ಏಕಾಏಕಿ ಬಂದು ನಿಂತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕಸದ ವಾಹನ ಕಾರಿಗೆ ಡಿಕ್ಕಿ ಹೊಡೆಯುವ ಸಂದರ್ಭದಲ್ಲಿ ಅರವಿಂದರಾವ್ ದೇಶಪಾಂಡೆ ಅವರು ಕಾರಿನ ಸಮೀಪದಲ್ಲೇ ನಿಂತಿದ್ದರು. ಅವರ ಜೊತೆಯಲ್ಲಿದ್ದ ವ್ಯಕ್ತಿಯೊಬ್ಬರು ಸಮಯಪ್ರಜ್ಞೆ ಮೆರೆದು ಅರವಿಂದರಾವ್ ದೇಶಪಾಂಡೆ ಅವರನ್ನು ಎಳೆದುಕೊಂಡಿದ್ದರಿಂದ ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ. ಅಪಘಾತದ ಬಳಿಕ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಅರವಿಂದರಾವ್ ದೇಶಪಾಂಡೆ ಅವರು ಕಸ ವಿಲೇವಾರಿ ವಾಹನದ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಅರವಿಂದ್ ರಾವ್ ದೇಶಪಾಂಡೆ ಅವರು ಈಟಿವಿ ಭಾರತ ಜೊತೆ ದೂರವಾಣಿ ಮೂಲಕ ಮಾತನಾಡಿ, ಅದೃಷ್ಟವಶಾತ್ ಅಪಘಾತದಿಂದ ನಾನು ಪಾರಾಗಿದ್ದೇ ದೊಡ್ಡದು, ಆ.29 ರಂದು ಅಥಣಿಯಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯುತ್ತಿತ್ತು, ಆ ಕಾರ್ಯಕ್ರಮಕ್ಕೆ ಅತಿಥಿಗಳು ಆಗಮಿಸಿದ್ದರು. ಸಂಜೆ ಅವರು ಮರಳಿ ಮನೆಗೆ ಹೋಗುವಾಗ ಅವರನ್ನು ಮನೆಯಿಂದ ಹೊರಗೆ ಬಂದು ಕಳಿಸಿ ಕೊಡುವಾಗ ಈ ಘಟನೆ ನಡೆಯಿತು. ನನ್ನ ಪಕ್ಕದಲ್ಲಿದ್ದವರೇ ನನ್ನನ್ನು ದೇವರಂತೆ ರಕ್ಷಿಸಿದರು. ಪುರಸಭೆ ಕಸ ವಿಲೇವಾರಿ ವಾಹನ ಚಾಲಕನ ಅಚಾತುರ್ಯದಿಂದ ಈ ಘಟನೆ ನಡೆದಿದೆ ಎಂದರು.ಇದನ್ನೂ ಓದಿ: ಧಾರವಾಡ: ಕಾರು ಪಲ್ಟಿಯಾಗಿ ಮೂವರು ಯುವಕರು ಸಾವು, ಮೂವರಿಗೆ ಗಂಭೀರ ಗಾಯ

Category

🗞
News
Transcript
00:00Thank you for listening.

Recommended