Skip to playerSkip to main content
  • 6 minutes ago
ಶಿವಮೊಗ್ಗ: ಕಾಗೋಡು ಹೋರಾಟದ ರೂವಾರಿ, ಸಮಾಜವಾದಿ ನೇತಾರ, ಮಾಜಿ ಸಚಿವ, ವಿಧಾನಸಭೆಯ ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಅವರಿಗೆ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಕಳೆದ ಐದು ದಶಕಗಳಿಂದಲೂ ರಾಜಕೀಯ ಜೀವನದಲ್ಲಿ‌ ಹಲವು ಏಳುಬೀಳು ಕಂಡು ಸಮಾಜದ ಪರ ಕೆಲಸ‌ ಮಾಡಿದ‌ ಮುತ್ಸದ್ದಿ ನಾಯಕನಿಗೆ 2026ನೇ‌‌ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಸಮಾಜ ಸೇವೆಯ ವಿಭಾಗದಲ್ಲಿ ಕಾಗೋಡು ತಿಮ್ಮಪ್ಪನವರಿಗೆ ಪ್ರಶಸ್ತಿ ಲಭಿಸಿದೆ. ಇದು ಅವರ ಅಭಿಮಾನಿಗಳಿಗೆ ಹಾಗೂ ಅವರ ಸಮುದಾಯದವರಿಗೆ ತೀವ್ರ ಸಂತಸವನ್ನು ತಂದಿದೆ.  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿರುವುದಕ್ಕೆ ಕಾಗೋಡು ತಿಮ್ಮಪ್ಪ‌ ತಮ್ಮ ಸಂಸತವನ್ನು ಹಂಚಿಕೊಂಡಿದ್ದಾರೆ. ''ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದಕ್ಕೆ ತುಂಬಾ ಖುಷಿ‌ ಆಗಿದೆ.‌ ಕರ್ನಾಟಕ ಸರ್ಕಾರ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದೆ. ಈ ಪ್ರಶಸ್ತಿಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಪ್ರಶಸ್ತಿ ನೀಡಿದ ರಾಜ್ಯದ ಮುಖ್ಯಮಂತ್ರಿಗೆ ಹಾಗೂ ಇತರ ಎಲ್ಲಾ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಅವರ ಅಭಿಮಾನಿಯಾಗಿ ಮುಂದುವರೆಯುತ್ತೇನೆ'' ಎಂದು ಕಾಗೋಡು ತಿಮ್ಮಪ್ಪ‌ ಖುಷಿ ಹಂಚಿಕೊಂಡಿದ್ದಾರೆ.  ಪ್ರಶಸ್ತಿ ಪ್ರದಾ‌ನ: 71ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 71 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಶಿಕ್ಷಣ, ವಿಜ್ಞಾನ - ತಂತ್ರಜ್ಞಾನ, ಕೃಷಿ, ಸಮಾಜಸೇವೆ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಿರುವ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ನವೆಂಬರ್​​ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ನಡೆಯಲಿದ್ದು, ಅಂದು ನಡೆಯುವ ಅಧಿಕೃತ ಕಾರ್ಯಕ್ರಮದಲ್ಲಿ 71 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಿಎಂ ಡಿ.ಕೆ.ಶಿವಕುಮಾರ್ ಪ್ರದಾ‌ನ ಮಾಡಲಿದ್ದಾರೆ.

Category

🗞
News
Transcript
00:03Music
00:04Music
00:06Music
00:06Music
00:09Music
00:36Music
00:38Music
00:38I am very happy to be able to bring the process to the Karnataka Council.
00:48I have not been able to bring the land to the Karnataka Council.
00:54I have been able to bring the leaders to the Karnataka Council.
00:58I'm not going to do that.
01:01I'm not going to do this.
01:06I'm not going to do it.
01:13I'm not going to do that.

Recommended